‘ಆರೋಗ್ಯ ಆಶಯ’ ಲೋಕಾರ್ಪಣೆ

‘ವಿಜಯ ಕರ್ನಾಟಕ’ ಹಾಗೂ ‘ಕನ್ನಡ ಪ್ರಭ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಒಟ್ಟು 77 ಅಂಕಣ ಬರಹಗಳನ್ನು ಹತ್ತು ಆಶಯಗಳಡಿಯಲ್ಲಿ ಕಟ್ಟಿಟ್ಟಿರುವ ‘ಆರೋಗ್ಯ ಆಶಯ’ ಸಂಕಲನವನ್ನು 2017, ಮೇ 22, ರವಿವಾರದಂದು ಬೆಳಗ್ಗೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದರು. ಡಾ. ಎಲ್. ಹನುಮಂತಯ್ಯ, ಡಾ. ನಾಗತಿಹಳ್ಳಿ ಚಂದ್ರಶೇಖರ್, ಡಾ. ಜಿ ರಾಮಕೃಷ್ಣ, ಸಿ ಆರ್ ಕೃಷ್ಣ ರಾವ್, ಅಬ್ದುಲ್ ರೆಹಮಾನ್ ಪಾಷ, ಡಾ. ಗೀತಾ ಶೆಣೈ, ಸ. ರಘುನಾಥ, ಎ ಸಿ ಡೋಂಗ್ರೆ ಅವರಂತಹ ಹಿರಿಯರು ಜೊತೆಗಿದ್ದರು.

ಎಂಸಿ ನರಸಿಂಹನ್, ಆರ್ ಎಸ್ ರಾಜಾರಾಂ, ಡಾ. ಸಿದ್ದನಗೌಡ ಪಾಟೀಲ್, ಎ ಆರ್ ಉಡುಪ, ಡಾ. ಪ್ರಕಾಶ್ ರಾವ್, ಡಾ. ಸಿ ಆರ್ ಚಂದ್ರಶೇಖರ್ ಮುಂತಾದ ಹಿರಿಯರೂ ಇದ್ದರು.

ಕನ್ನಡ ಪ್ರಭ ಬಳಗದ ಪ್ರಧಾನ ಸಂಪಾದಕ ಸುಗತ ಶ್ರೀನಿವಾಸರಾಜು ಸಕುಟುಂಬ ಹಾಜರಿದ್ದರು. ಹಾಗೆಯೇ, ಈ ಬರಹಗಳು ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ನೆರವಾಗಿದ್ದ ಕುಮಾರ್ ಹಾಗೂ ಸಹ್ಯಾದ್ರಿ ನಾಗರಾಜ್, ಮುಖಪುಟ ರಚಿಸಿದ ಕಲಾವಿದ ಸಂತೋಷ್ ಸಸಿಹಿತ್ಲು, ಮಿತ್ರರಾದ ಎನ್ ಎ ಎಂ ಇಸ್ಮಾಯಿಲ್, ಅಭಯ ಸಿಂಹ, ಡಾ. ಶ್ರೀನಿವಾಸ ಪ್ರಭು ಮುಂತಾದವರು ಕೂಡ ಭಾಗಿಗಳಾಗಿದ್ದರು.

ಈ ಕೃತಿಯನ್ನು ಗುರು ಡಾ. ಚಿತ್ತರಂಜನದಾಸ ಹೆಗ್ಡೆಯವರ ನೆನಪಿಗೆ ಅರ್ಪಿಸಲಾಗಿದ್ದು, ಅವರ ಮನೆಯವರೆಲ್ಲರೂ, ಭಾವ, ಮಾಜಿ ಸಚಿವ ಶ್ರೀ ಜಯಪ್ರಕಾಶ ಹೆಗ್ಡೆ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಲ್ಲಿ ಲಭ್ಯ: http://www.navakarnatakaonline.com/aarogya-aashaya-a-collection-of-articles

aaNavakarnatakaPrajavani 23 May 2016 CITY-22423_05_2016_002_015.jpg Image(samyukta karnataka 23-5-16) Image(vijaya karnataka 24-5-16) Image(vijayavani 23-5-16)

Malaria: Modern Day Management

This is my book on malaria and its management, published by Macmillan Medical Communications. In 370 pages, this book provides a concise review of pathogenesis of malaria; exhaustive description of clinical manifestations, typical and atypical; comprehensive analysis of diagnostic tests and their utility, authentic details of treatment, based on the recommendations of WHO, NVBDCP-India and CDC, US; detailed description of complications and their management as well as details of control measures, prevention strategies, and future prospects.

 Chapters:
 • The Problem of Malaria
 • Transmission, Life Cycle and Pathogenesis
 • Clinical Manifestations of Malaria
 • Diagnosis of Malaria
 • Treatment of Malaria
 • Severe Malaria
 • Control of Malaria
 • Prevention of Malaria
 • Future Prospects
 • Appendices 1. Diagnostic methods, 2. antimalarial drugs, 3. Districts/PHCs with chloroquine-resistant P. falciparum malaria and 4. Clinical examination of severe malaria

ಫ್ಲೂ ಎಂದು ಹೆದರುವಿರೇಕೆ?

ಹೊಸ 2009 ಹೆಚ್1 ಎನ್ 1  ಫ್ಲೂ ಸೋಂಕಿನ ಬಗ್ಗೆ ಜಗತ್ತಿನಾದ್ಯಂತ ಹುಟ್ಟಿಸಲಾಗಿರುವ ಭಯ-ಆತಂಕಗಳ ಹಿನ್ನೆಲೆಯಲ್ಲಿ, ಫ್ಲೂ ರೋಗದ ವೈಜ್ಞಾನಿಕ ಸತ್ಯಗಳ ಬಗ್ಗೆ ಬರೆಯಲಾಗಿರುವ ಪುಸ್ತಕವಿದು. ನನ್ನ ಸ್ವಂತ ಬರವಣಿಗೆಯಲ್ಲಿ ಪ್ರಕಟವಾಗಿರುವ ಮೊದಲ ಪುಸ್ತಕವೂ ಹೌದು.

ಫ್ಲೂ ಸೋಂಕು ಸಾಮಾನ್ಯವಾಗಿರುವುದಷ್ಟೇ ಅಲ್ಲ, ಅದನ್ನುಂಟು ಮಾಡುವ ವೈರಸ್ ಆಗಾಗ ರೂಪು ಬದಲಿಸಿಕೊಳ್ಳುವುದೂ ಹೊಸ ವಿಚಾರವೇನಲ್ಲ. ಹಾಗೆಯೇ ಹೊಸ ರೂಪ ಧರಿಸಿ ಬಂದ ಫ್ಲೂ ವೈರಸ್ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿ, ಅದರ ಪತ್ತೆಗಾಗಿ ದುಬಾರಿಯಾದ ಪರೀಕ್ಷೆಗಳನ್ನೂ, ಪ್ರಯೋಜನಕ್ಕಿಲ್ಲದ ಔಷಧಗಳನ್ನೂ, ಪ್ರಶ್ನಾರ್ಹವಾದ ಲಸಿಕೆಗಳನ್ನೂ ಅಮಾಯಕರ ಮೇಲೆ ಹೇರಲು ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು  ನಡೆಸಿದ ತಂತ್ರಗಾರಿಕೆಯನ್ನು ಎಳೆ-ಎಳೆಯಾಗಿ, ಆಧಾರ ಸಹಿತವಾಗಿ ಬಿಚ್ಚಿಡುವ ಪುಸ್ತಕ ಇದು. ಈ ಕೄತಿಗೆ ಶಿವಮೊಗ್ಗದ  ಕರ್ನಾಟಕ ಸಂಘವು 2010ರ ಡಾ. ಎಚ್.ಡಿ. ಚಂದ್ರಪ್ಪ ಗೌಡ ಅತ್ಯುತ್ತಮ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿದೆ.

ಮೊದಲ ಮುದ್ರಣ: 2010; ಪರಿಷ್ಕೃತ ಎರಡನೇ ಮುದ್ರಣ: 2011

ISBN: 9788184671551; NKP: 001536;  40/-

http://navakarnataka.com/

ಪುಸ್ತಕ ವಿಮರ್ಶೆಗಳು: ಹೊಸದಿಗಂತ, ಅಕ್ಟೋಬರ್ 24, 2010; ಪ್ರಜಾವಾಣಿ, ಸೆಪ್ಟೆಂಬರ್ 18, 2011

ಅನುವಾದಿಸಿದ ಪುಸ್ತಕಗಳು

ನಾನು ಪಿಯುಸಿ ಹಾಗೂ ವೈದ್ಯಕೀಯ ವ್ಯಾಸಂಗ ನಡೆಸುತ್ತಿದ್ದಾಗ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದ ಪುಸ್ತಕಗಳಿವು. ಈ ಪೈಕಿ ವಿಜ್ಞಾನದಲ್ಲಿ ವಿನೋದ ಎಂಬ ಪುಸ್ತಕ ಈಗಲೂ ಜನಪ್ರಿಯವಾಗಿದೆ.

ವಿಜ್ಞಾನದಲ್ಲಿ ವಿನೋದ
ಇಂಗ್ಲಿಷ್ ಮೂಲ: ಎಂ. ಸ್ತೊಲ್ಯಾರ್, ಎಂ. ಫೋಮಿನ್
ನವಕರ್ನಾಟಕ ಪ್ರಕಾಶನ
ಮೊದಲ ಮುದ್ರಣ: 1981
ಹದಿನೇಳು ಮರುಮುದ್ರಣಗಳು: 1983, 1984, 1987, 1991, 1993, 1994, 1997, 1998, 1999, 2001, 2003, 2006, 2006, 2007, 2008, 2009, 2012

ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ ರಜಾದಿನಗಳಲ್ಲಿ ನಾನು ಅನುವಾದಿಸಿದ ಪುಸ್ತಕ ಇದು. ಇಂದಿಗೂ ಸಾಕಷ್ಟು ಜನಪ್ರಿಯ.

ಇತರ ಪುಸ್ತಕಗಳು:

 • ಮಾರ್ಕ್ಸ್ ವಾದ ಮತ್ತು ಭಾರತದಲ್ಲಿ ದುಡಿಯುವ ವರ್ಗದ ಪಾತ್ರ (1983)(ಇಂಗ್ಲಿಷ್ ಮೂಲ: ಎಸ್.ಜಿ.ಸರ್ದೇಸಾಯಿ)
 • ಬದಲಾಗುತ್ತಿರುವ ವಿಶ್ವದಲ್ಲಿ ಕಮ್ಯೂನಿಸಂ (1985) (ಇಂಗ್ಲಿಷ್ ಮೂಲ: ಬೋರಿಸ್ ಪೊನೊಮರೆವ್)
 • ಯುದ್ಧವೀರರು: ಸೋವಿಯತ್ ಸೈನಿಕರ ಪರಾಕ್ರಮದ ಕಥೆಗಳು 1941-1945 (1985) (ಇಂಗ್ಲಿಷ್ ಮೂಲ: ಅಕ್ರಾಮ್ ಷರಿಪೊವ್)
 • ಪರಮಾಣು ಯುದ್ಧ: ವೈದ್ಯಕೀಯ ಮತ್ತು ಜೈವಿಕ ಪರಿಣಾಮಗಳು – ಸೋವಿಯತ್ ವೈದ್ಯರುಗಳ ದೃಷ್ಟಿಕೋನ  (1985) (ಇಂಗ್ಲಿಷ್ ಮೂಲ: ಯವ್ಗನಿ ಐ. ಚಸೋವ್, ಲಿಯುನಿವ್ ಎ. ಇಲ್ಯಿಸ್, ಅಂಜೆಲಿನಾ ಕೆ. ನುಸ್ಕೋವಾ)
 • ಬಂಡವಾಳಶಾಹಿ ಜಗತ್ತಿನಲ್ಲಿ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು  (1987)
 • ವ್ಲಾದಿಮಿರ್ ಇಲ್ಯಿಚ್ ಲೆನಿನ್: ಜೀವನದ ಪುಟಗಳಿಂದ (ಇಂಗ್ಲಿಷ್ ಮೂಲ: ಯೂರಿ ಅಕ್ಸ್ಯುತಿನ್, ಸ್ವೆತ್ಲಾನ ಮುರ್ತಿನ್ಚುಕ್)  (1987)
 • ಸ್ಟಾಲಿನ್ ವಿದ್ಯಮಾನ  (1988)